1) ನಿನ್ನದೇ ಧ್ಯಾನದಲಿ ನಿನ್ನ ಚಿಂತೆಯಲಿ, ನಿನ್ನ ದರುಶನಕಾಗಿ ಕಾಯುತಿಹೆನು
ಜನ್ಮ ಜನ್ಮಾಂತರದ ಪಾಪಗಳ ಸವೆಸುತ್ತ ನಿನ್ನ ಕೃಪೆಗಾಗಿ ಕಾಯುತಿಹೆನು.
ಎಲ್ಲಡಗಿಹೆ ದೇವ, ಎಲ್ಲಿ ಹೋಗಿಹೆ ತಂದೆ, ನಿನ್ನ ಕಾಣಲು ನಾನು ಪರಿತಪಿಸುತಿಹೆನು
ನಿನ್ನದೇ ಧ್ಯಾನದಲಿ........
ಯಾವ ಭಕ್ತನ ಮೊರೆ ಲಾಲಿಸಲು ಹೋಗಿಹೆಯೋ
ನಿನ್ನ ಈ ಭಕ್ತನ ಮರೆತಿಹೆಯಾ?
ನಿನ್ನದೇ ಧ್ಯಾನದಲಿ ..........
ಬೇಡಿಕೆಗಳ ರಾಶಿಯನು ಮುಂದಿರುಸುವೆನೆಂದಂಜಿಹೆಯಾ?
ನನಗೇನು ಬೇಕಿಲ್ಲ, ನೀನೊಬ್ಬನಲ್ಲದೇ
ನಿನ್ನದೇ ಧ್ಯಾನದಲಿ ನಿನ್ನ ಚಿಂತೆಯಲಿ ನಿನ್ನ ದರುಶನಕಾಗಿ ಕಾಯುತಿಹೆನು.