Monday, 30 March 2020

corona

 ಕರೋನಾ ವೈರಸ್  ಪೀಡೆ ಪ್ರಪಂಚದಾದ್ಯಂತ ಹಬ್ಬುತ್ತಿರುವುದು ಎಲ್ಲರಿಗೂ ಬಹಳ ಆತಂಕ ಉಂಟುಮಾಡಿದೆ.  ಸರ್ಕಾರಗಳು ಎಷ್ಟು ಪ್ರಯತ್ನಮಾಡಿದರೂ ಕರೋನಾ ಹಬ್ಬುತ್ತಲೇ ಇರುವುದು ಶೋಚನೀಯ.   ಪ್ರಯತ್ನ  ಎಷ್ಟಿದ್ದರೂ ಜನಗಳ ಎಚ್ಚರಿಕೆಯಿಂದಲೇ ಈ ಮಾರಿಯನ್ನ ಬಗ್ಗುಪಡಿಸಬಹುದೆಂಬ ಅಂಶ ಮನವರಿಕೆಗೆ ಬಂದಿದೆ.
ಈ ಅಂಶದಲ್ಲಿ ಪ್ರಧಾನಿ ಮೋದಿರವರು ತೆಗೆದುಕೊಳ್ಳುತ್ತಿರುವ ಹೆಜ್ಜೆಗಳು ಈ ವೈರಸನ್ನು ನಮ್ಮ ದೇಶದಲ್ಲಿ ತಡೆಗಟ್ಟಲು ಒಂದು ದಿಟ್ಟ ಪ್ರಯತ್ನವಾಗಿದೆ.
ಇಡೀ ದೇಶದ ಜನರೆಲ್ಲಾ ಮನೆಗಳಲ್ಲೇ ಇದ್ದು ೨೧ ದಿನಗಳ ಕಾಲ ಕಳೆಯುವುದು ಸುಲಭದ ಕೆಲಸವೇನಲ್ಲ.  ಆದರೆ ಕರೋನಾ ನಿಯಂತ್ರಿಸಲು ಮತ್ತೇನೂ ಔಷಧಗಳಾಗಲೀ, ಮಂತ್ರ ತಂತ್ರಗಳಾಗಲೀ ಇಲ್ಲದಿರುವುದರಿಂದ  , ಆ ಖಾಯಿಲೆ ಬಂದಿರುವ ವ್ಯಕ್ತಿ ಬಹುಬೇಗ ನೂರಾರು ಸಾವಿರಾರು ಜನರಿಗೆ ಹಬ್ಬಿಸಬಹುದಾದ್ದರಿಂದ ಜನರ ಜೊತೆ ಮಿಳಿತವಾಗದೆ ಮನೆಗಳಲ್ಲೇ ಇರಬೇಕೆಂಬುದು ಸೂಕ್ತ ಸಲಹೆ 

No comments: