Tuesday, 10 March 2020

elliruve neenendu entu ariyali deva

ಎಲ್ಲಿರುವೆ ನೀನೆಂದು ಎಂತು  ಅರಿಯಲಿ ದೇವಾ , ಸೃಷ್ಟಿಕರ್ತ ನಿನಗೆ ಮರೆಯೇಕೆ?
ಹೆತ್ತ ತಾಯಿಯು ಶಿಶುವ ಮರೆ ಯಿಂದ ಲಾಲಿಪಳೇ? ಮರೆಯಿಂದಲೇ  ಪೊರೆವ ಲೀಲೆಯಿದೇನು?
ತಾಯಿ ತಂದೆಯರ ರೂಪದಿ ನೀ ಬಂದು ನನ್ನೀ ಜಗಕೆ ತಂದು ಸಲಹುತಿಹೆಯಾ?
ಗುರುಹಿರಿಯರಾ ರೂಪದಲಿ  ನೀ ಬಂದು ಇಹದ ಜ್ಞಾನವನು ಅರಿಸುತಿಹೆಯಾ?
ಬಂಧು ಸಖರಾ ರೂಪದಲ್ಲಿ ನೀ ಬಂದು ಪೊರೆಯುತಿಹೆಯಾ? ಮೆರೆ ಸುತಿಹೆಯಾ ?

No comments: