Tuesday, 17 March 2020

elli avitu nodutiheyo


ಎಲ್ಲಿ ಅವಿತು ನೋಡುತಿಹೆಯೋ, ಈ ನಿನ್ನ ಸೃಷ್ಟಿಯನ್ನು, ಎಂತು ಪರಿಪಾಲಿಸುತಿಹೆ ಈ ಅಘಾಧ ವಿಶ್ವವನ್ನು’
ವಿಶಾಲ ವಿಶ್ವದ ದೃಶ್ಯ ನೀಡಿ, ಅದೃಶ್ಯನಾಗಿಹೆಯಾ ?
ಜಗದಾಧಾರ ನೀ ಜಗವ ವ್ಯಾಪಿಸಿಹೆಯಾ ?
ಎಲ್ಲಿ ಅವಿತು ನೋಡುತಿಹೆಯೋ.......................

ಭೂಮಿಯನು, ಸೂರ್ಯಚಂದ್ರರನು, ನಕ್ಷತ್ರ ಸ್ಥೋಮಗಳನು,
ಜೀವರಾಶಿಗಳನು, ನಿರ್ಜೀವಿಗಳನು, ಸಸ್ಯ ಸಮೂಹಗಳನು
ಬೆಂಕಿಯನು, ಗಾಳಿಯನು,  ನೀರನ್ನು ಸೃಷ್ಟಿಸಿದವ
ಎಲ್ಲಿ ಅವಿತು ನೋಡುತಿಹೆಯೋ.................

ಗಂಡು ಹೆಣ್ಣುಗಳ ನಿರ್ಮಿಸಿದೆ ನಿನ್ನ ಕಾರ್ಯದ ನಿರಂತರತೆಗಾಗಿ,
ಜೀವಿಗಳು ಒಂದು ಇನ್ನೊಂದರನವಲಂಬಿಸುವಂತೆ ನೀ ಮಾಡಿಹೆ ದೇವಾ
ಆಸೆ ಮೋಹಗಳನಿತ್ತೆ, ದ್ವೇಷಾಸೂಯೆಗಳನಿತ್ತೆ
ಕೊನೆಗೆ ಕಾಲ ಮಿತಿಯನಿತ್ತು ಸಲಹಿಯೋ ದೇವಾ
ಎಲ್ಲಿ ಅವಿತು ನೋಡುತಿಹೆಯೋ..........

ಮನುಜನನು ಸೃಷ್ಟಿಸಿದೆ ನಿನ್ನ ಚಿಂತಿಸಲೆಂದು
ನಿನ್ನ ಸೃಷ್ಟಿಯ ಸೊಬಗ ಸವಿಯಲೆಂದು
ನಿನ್ನ ಕಾರ್ಯ ವೈಖರಿಗೆ ಬೆರಗಾಗಲೆಂದು
ನಿನ್ನ ಚಿತ್ರ ವೈಚಿತ್ರ್ಯಕೆ ಮಣಿಯಲೆಂದು.
ಎಲ್ಲಿ ಅವಿತು ನೋಡುತಿಹೆಯೋ.........

No comments: